ಸಂಖ್ಯೆ:29/11, ಉದಯ ಸಹಕಾರ ಭವನ, ಮೌಂಟ್ ಜಾಯ್ ರಸ್ತೆ, 1ನೆ ಮುಖ್ಯ ರಸ್ತೆ,
ಬೆಂಗಳೂರು-560 019

ಕೆಲಸದ ವೇಳೆ

ಸೋಮವಾರದಿಂದ ಶನಿವಾರದವರೆಗೆ

ಬೆಳಿಗ್ಗೆ 10:00 ರಿಂದ ಸಂಜೆ 7:00 ರವರೆಗೆ

ಉದಯ ಮಾಹಿತಿ
  • ಸದಸ್ಯರಿಗೆ ತ್ವರಿತ ಸಾಲ ಸೌಲಭ್ಯಗಳು
  • ಸದಸ್ಯರ ಠೇವಣಿಗಳಿಗೆ ಉತ್ತಮ ಬಡ್ಡಿ
  • ಹಿರಿಯ ನಾಗರಿಕ ಸದಸ್ಯರಿಗೆ 0.5% ಅಧಿಕ ಬಡ್ಡಿ
  • ಠೇವಣಿ ಹಣ ದ್ವಿಗುಣ ಹಾಗೂ ತ್ರಿಗುಣ ಸೌಲಭ್ಯ
  • ಸದಸ್ಯರಿಗೆ ಲಾಕರ್ ಸೌಲಭ್ಯ
  • ಸದಸ್ಯರಿಗೆ ಚೀಟಿ ಯೋಜನೆಗಳು
|   ಸಾಮಾನ್ಯ ವಿಮೆ ಲಭ್ಯವಿದೆ.

“ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ” ಎಂಬ ಸಹಕಾರಿ ತತ್ವದ ಆಧಾರದ ಮೇಲೆ 1996 ರಲ್ಲಿ ಸ್ಥಾಪಿಸಲ್ಪಟ್ಟ ಉದಯ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ, ಉದಯ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಎಂದು ಜನಪ್ರಿಯವಾಗಿರುವ ಎಲ್ಲ ವರ್ಗದ ಜನಸಮುದಾಯದ ಆರ್ಥಿಕ ಮೂಲ ಸೌಲಭ್ಯಗಳ ಸೇವಾಪೂರೈಕೆಯ ಉದ್ದೇಶದಿಂದ ಸ್ಥಾಪಿತವಾಗಿದ್ದು, 24 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದ್ದು ಉತ್ತಮ ಗ್ರಾಹಕ ಸದಸ್ಯ ಬಂಧುಗಳನ್ನು ಹೊಂದಿದೆ.

ದೇಶದ ಆರ್ಥಿಕ ಬದಲಾವಣೆಗೆ ಅನುಸಾರವಾಗಿ ಇತರ ಆರ್ಥಿಕ ಸಂಸ್ಥೆಗಳೊಂದಿಗೆ ಸಮನಾದ ಪೈಪೋಟಿಗಳನ್ನು ಎದುರಿಸುತ್ತ ಸದಸ್ಯ ಬಂಧುಗಳಿಗೆ ಆಕರ್ಷಕ ಠೇವಣಿ ಸೌಲಭ್ಯಗಳು, ಉಳಿತಾಯ ಯೋಜನೆಗಳು, ಸಾಲ ಸೌಲಭ್ಯಗಳನ್ನೊದಗಿಸುತ್ತ ಕರ್ನಾಟಕ ರಾಜ್ಯದಲ್ಲಿ ಒಂದು ಉತ್ತಮ ಸಹಕಾರಿ ಸಂಸ್ಥೆಯಾಗಿ ಹಂತ ಹಂತವಾಗಿ ಪ್ರಗತಿಯತ್ತ ಸಾಗುತ್ತ ಆರ್ಥಿಕವಾಗಿ ಸದೃಢವಾಗಿ ಉತ್ತಮ ಲಾಭಾಂಶದಿಂದ ಸಮಾಜದ ಏಳಿಗೆಗಾಗಿ ಪರಿಣಾಮಕಾರಿಯಾಗಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತ ಸಂಪ್ರದಾಯಗಳನ್ನು ಉಳಿಸಿಕೊಳ್ಳುವುದರೊಂದಿಗೆ ನವೀನ ತಂತ್ರಜಾನವನ್ನೂ ಅಳವಡಿಸಿಕೊಂಡು ಉತ್ತಮ ಗ್ರಾಹಕ ಸೇವೆಯನ್ನು ನೀಡುವಲ್ಲಿ ನಮ್ಮ ಸಂಸ್ಥೆ ಯಶಸ್ವಿಯಾಗಿದೆ.